ವರದಿ: ಶರಣು ಮರಾಠಿ
ಕನಕಗಿರಿ: 3 ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ಕೊಪ್ಪಳ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬುಧವಾರ ಕನಕಗಿರಿ ಪೌರ ಸೇವಾ ನೌಕರರ ಸಂಘದ ಸಭೆ ನಡೆಯಿತು.
ಕನಕಗಿರಿ ಶಾಖೆ ಅಧ್ಯಕ್ಷ ಹುಸೇನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರ ಸೇವಾ ನೌಕರರು ಹಾಗೂ ಪೌರಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಕುರಿತು ಚರ್ಚಿಸಲಾಯಿತು. ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಜಂಟಿ ಕಾರ್ಯದರ್ಶಿ ಲಾಲಾಸಾಬ್ ಮನಿಯಾರ್ ಭರವಸೆ ನೀಡಿದರು.
ಸೆ.23ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪೌರಕಾರ್ಮಿಕ ದಿನಾಚರಣೆ ಕುರಿತು ಜಿಲ್ಲಾ ಅಧ್ಯಕ್ಷ ವಸಂತ ಬೆಲ್ಲದ ಮಾಹಿತಿ ನೀಡಿದರು.
ಇದೇ ವೇಳೆ ಕನಕಗಿರಿ ಶಾಖೆಯ ನೂತನ ಗೌರವಾಧ್ಯಕ್ಷರಾಗಿ ಕನಕಪ್ಪ ನಾಯಕ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ನಿರ್ದೇಶಕರಾಗಿ ಪುರುಷೋತ್ತಮ್ ಪತ್ತಾರ್ ಹಾಗೂ ಆಂಜನೇಯ ಅವರನ್ನು ಆಯ್ಕೆ ಮಾಡಿ, ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ರಾಜ್ಯ ಜಂಟಿ ಕಾರ್ಯದರ್ಶಿ ಲಾಲಾಸಾಬ್ ಮನಿಯಾರ್, ಜಿಲ್ಲಾಧ್ಯಕ್ಷ ವಸಂತ ಬೆಲ್ಲದ, ಉಪಾಧ್ಯಕ್ಷ ಚಿರಂಜೀವಿ, ಜಂಟಿ ಕಾರ್ಯದರ್ಶಿ ಪ್ರಕಾಶ್ ಮಹಿಪತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು
