*ಗಂಗಾವತಿ,ಅ.5-*
ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಸಮೂಹ
ಕಾನೂನುಗಳ ಕುರಿತು ತಿಳಿದುಕೊಂಡು ಸಂಸಧಿಯ ರಾಜಕಾರಣದಲ್ಲಿ ಪಾಲ್ಗೊಳ್ಳಬೇಕು ಆಗ ಮಾತ್ರ ದೇಶ ಇನ್ನಷ್ಟು ಅಭಿವೃದ್ಧಿ ಆಗಲು ಸಾಧ್ಯ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ ಕೆ.ಎಚ್ ಅವರು ಹೇಳಿದರು.
ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಣುಕು ಸಂಸತ್ತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಷಯ ಮಂಡಿಸುವಾಗ ಅಂಕಿ ಅಂಶಗಳು ಮತ್ತು ಮಾಹಿತಿಯು ನಿಕರವಾಗಿರಬೇಕು. ಸರಳವಾದ ಭಾಷೆ ಮತ್ತು ಸ್ಪಷ್ಟವಾದ ಮಾತು ಬಳಸಬೇಕು.
ಕಡಿಮೆ ಸಮಯದಲ್ಲಿ ಹೆಚ್ಚು ಮಾಹಿತಿ ಪ್ರಸ್ತುತ ಪಡಿಸುವ ಕಲೆ ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಶಿವರಾಜ
ಗುರಿಕಾರ ಅವರು ಸಂಸತ್ತಿನಲ್ಲಿ ಚರ್ಚೆಗಳು ಯಾವ ರೀತಿ ನಡೆಯುತ್ತಿವೆ ಎಂಬುದನ್ನು ನಿಮಗೆ ಇದರಿಂದ ತಿಳಿಯುವುದರ ಜತೆಗೆ ರಾಜಕೀಯ ಜ್ಞಾನ ಬರುತ್ತದೆ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಉಮಾಕಾಂತ ಅವರಡ್ಡಿ ಅವರು ಮಾತನಾಡುತ್ತ ಇದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾದದ್ದು. ಮತದಾನ ಹಕ್ಕು ಮಹತ್ವವಾದದ್ದು. ಈ ರೀತಿಯ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಅಣುಕು ಯುವ ಸಂಸತ್ತು ಸಭೆಯಲ್ಲಿ ಬರಗಾಲದ ಕುರಿತು ವಿದ್ಯಾರ್ಥಿಗಳಾದ ಶ್ರೀನಿವಾಸ, ಮಹ್ಮದ್, ಶಿವಶರಣ, ಯಶೋಧ,
ಅಕ್ಸನ , ಶ್ರೀನಿವಾಸ, ಮದುಕುಮಾರ್,
ಶಿವಗಂಗಾ ವಿಷಯವನ್ನು ಮಂಡಿಸಿದರು.
ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮತ್ತು ನಿಯಂತ್ರಣ ಕುರಿತುವಿದ್ಯಾರ್ಥಿಗಳಾದ ಗುರು ಕಿರಣ್, ಇಸ್ಮಾಯಿಲ್, ಸೌಜನ್ಯ ವಿಷಯ ಮಂಡಿಸಿದರು.
ಹಾಗೂ
ಕಲುಷಿತಗೊಳ್ಳುತ್ತಿರುವ ತುಂಗಭದ್ರಾ ಮಲಿನವಾಗುತ್ತಿರುವ ಕುಡಿಯುವ ನೀರು ಕುರಿತು ವಿದ್ಯಾರ್ಥಿಗಳಾದ ತುಳಸಿ, ಲಕ್ಷ್ಮೀ, ರೇಣುಕಾ, ಶೈಲಜಾ ಮರಿಯಪ್ಪ ಮತ್ತು ಲಕ್ಷ್ಮೀ ವಿಷಯವನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ನರಸಿಂಹ, ಶಿವರಾಜ ಜಾಲವಾಡಿಗಿ, ಡಾ.ಅಯ್ಯಪ್ಪ, ಪುಲೆಶ ವಲಿ, ಬಸವರಾಜ, ದುರಗಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
