October 7, 2026
IMG-20260830-WA0130

ಗಂಗಾವತಿ: ನಗರದ ವಾರ್ಡ್‌ ನಂ.32ರ ಚಲುವಾದಿ ವಾರ್ಡ್‌ನ ಹಿರೇಜಂತಕಲ್ಲ ಪ್ರದೇಶದಲ್ಲಿರುವ ಗಡದುರ್ಗಮ್ಮ ಗಂಗಾ ಸ್ಥಳದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಕ್ತರಿಗೆ ಅನುಕೂಲ ಕಲ್ಪಿಸುವ ಸೇವಾ ಕಾರ್ಯ ಗಮನ ಸೆಳೆದಿದೆ.
ಶ್ರಾವಣ ಮಾಸದಲ್ಲಿ ಗಡದುರ್ಗಮ್ಮ ಗಂಗಾ ಸ್ಥಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ, ಗುಡಿಯ ಮುಂಭಾಗದಲ್ಲಿ ಭಕ್ತರಿಗೆ ನೆರಳು ಹಾಗೂ ಮಳೆಯಿಂದ ರಕ್ಷಣೆ ಕಲ್ಪಿಸುವ ಉದ್ದೇಶದಿಂದ ಚಪ್ಪರ ನಿರ್ಮಿಸಲಾಗುತ್ತಿದೆ.
ಚಪ್ಪರ ನಿರ್ಮಾಣಕ್ಕೆ ಅಗತ್ಯವಿರುವ ನಾಲ್ಕು ರಾಡ್‌ಗಳು ಹಾಗೂ ಮೇಲ್ಭಾಗಕ್ಕೆ ಬೇಕಾದ ರಾಡ್‌ಗಳನ್ನು ಸುನೀಲ್ ಅರತಿ ಅವರು ಸ್ವಯಂಪ್ರೇರಣೆಯಿಂದ ಒದಗಿಸುವ ಮೂಲಕ ಸಹಕಾರ ನೀಡಿದ್ದಾರೆ.
ಧಾರ್ಮಿಕ ಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಸುನೀಲ್ ಅರತಿ ಅವರು ಸೇವಾ ಮನೋಭಾವ ಮೆರೆದಿದ್ದಾರೆ. ಅವರ ಸಹಕಾರಕ್ಕೆ ಗಡದುರ್ಗಮ್ಮ ಗಂಗಾ ಸ್ಥಳದ ಭಕ್ತರು ಹಾಗೂ ವಾರ್ಡ್‌ನ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇವರ ಸನ್ನಿಧಿಯಲ್ಲಿ ಮಾಡುವ ಸೇವೆ ಭಕ್ತರ ಅನುಕೂಲಕ್ಕೆ ಬಳಕೆಯಾದಾಗ ಅದರ ಸಾರ್ಥಕತೆ ಮತ್ತಷ್ಟು ಹೆಚ್ಚುತ್ತದೆ ಎಂಬ ಮಾತಿಗೆ ಈ ಕಾರ್ಯ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *