.*
ಕನಕಗಿರಿ,ಸೆ.14-
ಪಟ್ಟಣದ 9ನೇ ವಾರ್ಡಿನ ಶ್ರೀ ಈರಣ್ಣ ದೇವಸ್ಥಾನ ಸೇವಾ ಸಮಿತಿಯಿಂದ ಸತತವಾಗಿ 5ನೇ ವರ್ಷದ ಗಣೇಶೋತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದ್ದು, ತಾನಾಜಿ ಮಾಲ್ಸುರನ ಪ್ರತಿರೂಪವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಕಾರಟಗಿ ಪಟ್ಟಣ ನಾಗನಕಲ್ ಗ್ರಾಮದಿಂದ ಬೃಹತ್ತಾಕಾರದ ಗಣಪತಿಯನ್ನು ಟ್ರಾಕ್ಟರ ಮೂಲಕ, ಬಾಜಾ, ಭಜಂತ್ರಿಯೊಂದಿಗೆ ಮೆರವಣಿಗೆ ಮಾಡಿ ಪ್ರತಿಷ್ಠಾಪನೆ ಮಾಡಲಾಯಿತು.
ಸುಬೇದಾರ್ ತಾನಾಜಿ ಮಾಲ್ಸುರ್ ಅವರು ಮರಾಠಾ ಸಾಮ್ರಾಜ್ಯದ ಶ್ರೇಷ್ಠ ಮಿಲಿಟರಿ ಕಮಾಂಡರ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಬಾಲ್ಯದ ಆಪ್ತ ಸ್ನೇಹಿತ ಹಾಗೂ ನಂಬಿಕಸ್ಥ ಯೋಧರಾಗಿದ್ದರು. ಕೊನೆಯುಸಿರಿನವರೆಗೂ ಹೋರಾಡಿ ವೀರಮರಣ ಹೊಂದಿದ ತಾನಾಜಿ ಮಾಲ್ಸುರ್ ಬಗ್ಗೆ ಛತ್ರಪತಿ ಶಿವಾಜಿಯು ಪ್ರತಿಕ್ರಿಯಿಸುತ್ತ ತಾನಾಜಿ ಅವರ ಅಗಲಿಕೆಯಿಂದ ದುಃಖಿತರಾದ ಶಿವಾಜಿ ಮಹಾರಾಜರು “ಗಢ್ ಆಲಾ, ಪಣ್ ಸಿಂಹ್ ಗೇಲಾ” ಕೋಟೆ ಸಿಕ್ಕಿತು, ಆದರೆ ಸಿಂಹ ಕಳೆದುಹೋಯಿತು ಎಂದು ನುಡಿದರು. ಅಂತಹ ಅಪ್ಪಟ ವೀರ ಯೋಧ ತಾನಾಜಿ ಮಾಲ್ಸುರನ ಪ್ರತಿರೂಪವಾಗಿ ಗಣಪತಿ ಪ್ರತಿಷ್ಠಾಪನೆಯನ್ನು ಶ್ರೀ ಈರಣ್ಣ ದೇವಸ್ಥಾನ ಸೇವಾ ಸಮಿತಿಯಿಂದ ಕನಕಗಿರಿಯ 9ನೇ ವಾರ್ಡಿನಲ್ಲಿ ವಿಜೃಂಭಣೆಯಿಂದ ಸೋಮವಾರ ಪ್ರತಿಷ್ಠಾಪನೆ ಮಾಡಲಾಯಿತು.
ನಂತರ ಮಾತನಾಡಿದ ಸಹ ಕಾರ್ಯದರ್ಶಿ ಕನಕರಾಯ ಕೊರಗಟಗಿ, ಅಧ್ಯಕ್ಷ ಶರಣಪ್ಪ ಮಹಿಪತಿ ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಪ್ರತಿಷ್ಠಾಪನೆ ಮಾಡಿದ್ದು, 5 ದಿನಗಳ ನಂತರ ವಿಸರ್ಜನೆ ಮಾಡಲಾಗುವುದು, ಮತ್ತು ಬುಧವಾರ ಅನ್ನ ಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕನಕಗಿರಿಯ ಸದ್ಭಕ್ತರು ತನು ಮನ ಧನದಿಂದ ಭಾಗವಹಿಸಿ, ಪ್ರಸಾದ ಸ್ವೀಕರಿಸಿ ಗಣೇಶನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು. ಮತ್ತು ಗಣಪತಿ ವಿಸರ್ಜನೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಹಾಗೂ ಮಹಿಳೆಯರು ಕಲಶದೊಂದಿಗೆ ಗಣೇಶ ವಿಸರ್ಜನೆಗೆ ಭಾಗವಹಿಸಿ ಈ ಕಾರ್ಯಕ್ರಮದ ಯಶಸ್ವಿಗೆ ಕಾರಣಿಕರ್ತರಾಗಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಈರಣ್ಣ ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ನಾಗೇಶ ಕೊರಗಟಗಿ, ಹಿರಿಯರಾದ ತುಕಾರಾಮ್ ಗೊಂದಳೇ, ಜಯಪ್ರಕಾಶ್ ರೆಡ್ಡಿ ಮಾದಿನಾಳ, ಪದಾಧಿಕಾರಿಗಳಾದ ಪ್ರಜ್ವಲ್, ಶಿವರಾಜ, ಬಸವರಾಜ, ಮುಜ್ಜು, ಇರ್ಫಾನ್, ನವೀನ, ಅಭಿಷೇಕ್, ಕಲಂದರ್, ಮೌನೇಶ್, ಖಾಸಿಂ, ಪ್ರಶಾಂತ್, ಮುಸ್ತಫಾ, ಮಣಿಕಂಠ, ದಾದು, ಮುತ್ತುರಾಜ್, ಇತರರು ಉಪಸ್ಥಿತರಿದ್ದರು.
