ಕಾರಟಗಿ/ಸಿದ್ದಾಪುರ: ರೋಗಿಗಳ ಆರೋಗ್ಯ ಕಾಪಾಡಬೇಕಾದ ಸರ್ಕಾರಿ ಆರೋಗ್ಯ ಕೇಂದ್ರದಲ್ಲೇ ಔಷಧಿ ವಿತರಣೆಯಲ್ಲಿ ನಿರ್ಲಕ್ಷ್ಯ ನಡೆದಿದೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಧಿ ಮೀರಿದ ಔಷಧಿ ರೋಗಿಗಳಿಗೆ ವಿತರಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಔಷಧಿ ವಿತರಿಸುವ ಮುನ್ನ Expiry Date, ಬ್ಯಾಚ್ ಸಂಖ್ಯೆ ಹಾಗೂ ಔಷಧಿಯ ಗುಣಮಟ್ಟ ಪರಿಶೀಲಿಸುವುದು ಅಗತ್ಯ. ಹೀಗಾಗಿ ಆರೋಪ ನಿಜವಾಗಿದ್ದರೆ, ಔಷಧಿ ಸ್ಟಾಕ್ ನಿರ್ವಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ಲೋಪವಾಗಿರುವ ಸಾಧ್ಯತೆಯಿದೆ.
ಫಾರ್ಮಾಸಿಸ್ಟ್ ಕರ್ತವ್ಯದ ಮೇಲೂ ಪ್ರಶ್ನೆ
ಔಷಧಿ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಫಾರ್ಮಾಸಿಸ್ಟ್ ಅವರ ಜವಾಬ್ದಾರಿ ಪ್ರಮುಖವಾಗಿರುವುದರಿಂದ, ಅವರ ಕರ್ತವ್ಯ ನಿರ್ವಹಣೆಯನ್ನೂ ತನಿಖೆಗೊಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಆದರೆ ತನಿಖೆ ಪೂರ್ಣಗೊಳ್ಳುವ ಮುನ್ನ ಯಾರನ್ನೂ ತಪ್ಪಿತಸ್ಥರೆಂದು ಘೋಷಿಸಬಾರದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸ್ಟಾಕ್ ರಿಜಿಸ್ಟರ್ ಪರಿಶೀಲನೆಗೆ ಆಗ್ರಹ
ಔಷಧಿ ಸ್ಟಾಕ್ ರಿಜಿಸ್ಟರ್, ಬ್ಯಾಚ್ ಸಂಖ್ಯೆ, Expiry Date ಹಾಗೂ ವಿತರಣಾ ದಾಖಲೆಗಳನ್ನು ಪರಿಶೀಲಿಸಿದರೆ ಆರೋಪದ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ. ಆರೋಗ್ಯ ಇಲಾಖೆ ತಕ್ಷಣ ಸ್ಟಾಕ್ ಪರಿಶೀಲನೆ ನಡೆಸಿ, ಅವಧಿ ಮೀರಿದ ಔಷಧಿಗಳಿದ್ದರೆ ಪ್ರತ್ಯೇಕಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆರೋಪ ಸತ್ಯವಾಗಿದ್ದರೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು; ಆಧಾರವಿಲ್ಲದಿದ್ದರೆ ದಾಖಲೆಗಳೊಂದಿಗೆ ಸ್ಪಷ್ಟನೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
“”‘ಗೌರಿಶಂಕರ ಟಿ ಎಚ್ ಒ
ಸೆಪ್ಟೆಂಬರ್ ತಿಂಗಳವರೆಗೆ ಈ ಮಾತ್ರೆ ಕೊಡಬಹುದು ಇನ್ನೂ ಅವದಿ ಇದೆ.ನಾನು ಖುದ್ದಾಗಿ ಪರಿಶೀಲನೆ ನಡೆಸಿ, ಕೊಡಲು ಹೇಳಿದೆ.””
