October 7, 2026
IMG-20260831-WA0057

ಕೊಪ್ಪಳ: ಕೊಪ್ಪಳ ತಾಲೂಕಿನ ಬೂದುಗುಂಪಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೇಶನಹಳ್ಳಿ ಗ್ರಾಮದಲ್ಲಿ ₹26 ಲಕ್ಷ ವೆಚ್ಚದಲ್ಲಿ ಎರಡು ಹೊಸ ಬಾತ್‌ರೂಮ್‌ಗಳು, ಒಂದು ಹೊಸ ಕೊಠಡಿ ಹಾಗೂ ನೀರಿನ ಟ್ಯಾಂಕ್ ನಿರ್ಮಿಸಬೇಕಿದ್ದ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ನಿಗದಿತ ಯೋಜನೆಯಂತೆ ಹೊಸ ಕಟ್ಟಡ ನಿರ್ಮಿಸುವ ಬದಲು, ಈಗಾಗಲೇ ಇರುವ ಹಳೆಯ ಕಟ್ಟಡದ ಬಾತ್‌ರೂಮ್‌ಗಳನ್ನು ಅರ್ಧಕ್ಕೆ ಕೆಡವಿ, ಅದೇ ಸ್ಥಳದಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಕಾಮಗಾರಿಯಲ್ಲಿ ಜೆಇ ಕಾರ್ತಿಕ್, ಸೂಪರ್‌ವೈಸರ್ ಅಂಬರೀಶ್ ಹಾಗೂ ಗುತ್ತಿಗೆದಾರರು ಶಾಮೀಲಾಗಿದ್ದಾರೆ ಎಂದು ನಾಗೇಶನಹಳ್ಳಿ ಗ್ರಾಮದ ಯುವ ಮುಖಂಡ ಕಾಶಿಂ ಕೆ.ಎನ್. ಆರೋಪಿಸಿದ್ದಾರೆ.

ಈ ಆರೋಪಕ್ಕೆ ಊರಿನ ಹಿರಿಯರಾದ ಗಿಣಿಗೇರಾ ಹನುಮಂತಪ್ಪ, ಶ್ರೀಧರ ಗೌಡ ಹಾಗೂ ಕರವೇ ಮುಖಂಡ ಮುತ್ತಪ್ಪ ಅವರು ಸಹ ಆಕ್ಷೇಪ ವ್ಯಕ್ತಪಡಿಸಿ, ಕಾಮಗಾರಿ ಹೆಸರಿನಲ್ಲಿ ಸುಳ್ಳು ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಿ ಹಣ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.

ಕಾಮಗಾರಿ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಕಾಮಗಾರಿಯ ಅಂದಾಜು ಪತ್ರ, ಅನುಮೋದನೆ, ಕಾಮಗಾರಿಯ ಪ್ರಮಾಣ, ಗುಣಮಟ್ಟ ಹಾಗೂ ಇದುವರೆಗೆ ಮಾಡಲಾಗಿರುವ ಬಿಲ್‌ಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಮಗಾರಿಯಲ್ಲಿ ಯಾವುದೇ ಅಕ್ರಮ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಆರೋಪಗಳ ಕುರಿತು KRDEL ಇಲಾಖೆಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *