Oplus_19005440
ಕನಕಗಿರಿ,ಸೆ.21-
ತಾಲೂಕಿನ ಕನಕಾಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕೋರಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ (ರಿ.), ಗ್ರಾಮ ಘಟಕ ಕನಕಾಪುರ ಗ್ರಾಮದ ರೈತರಿಂದ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
*ರೈತರ ಪ್ರಮುಖ ಬೇಡಿಕೆಗಳು:*
ಕೃಷ್ಣಾ ಬಿ ಸ್ಕೀಮ್ ಯೋಜನೆಯಿಂದ ಬರುವ ನೀರು ಕಳೆದ ಒಂದು ತಿಂಗಳಿಂದ ಕೆರೆಗಳಿಗೆ ಹರಿದಿಲ್ಲದಿರುವುದರಿಂದ, ಜನಗಳಿಗೆ ಮತ್ತು ಮೂಕಪ್ರಾಣಿಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ದಾಸರನಾಲು ಹಾಗೂ ಬೈಲಕುಂಪುರ ಹಳ್ಳದ ಮಾರ್ಗವಾಗಿ ಬರುವ ವಾಲ್ ನ್ನು ಅಧಿಕಾರಿಗಳು ಆಫ್ ಮಾಡಿದ್ದು, ಕೂಡಲೇ ನೀರು ಬಿಡಲು ಕ್ರಮವಹಿಸಬೇಕು. ಕನಕಾಪುರ ಗ್ರಾಮದಲ್ಲಿ ಜೆ.ಜೆ.ಎಂ ಕೆಲಸದ ಸಂದರ್ಭದಲ್ಲಿ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬೇಕು. ಸಿ.ಸಿ. ರಸ್ತೆ ನಿರ್ಮಾಣ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಎಲ್ಲೆಂದರಲ್ಲಿ ಹರಿಯುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ.
80 ರಿಂದ 100 ಹೊಸ ಮನೆಗಳು ಬಂದಿರುವ ಬನ್ನಿ ಗಿಡದ ಕ್ಯಾಂಪ್ ಮತ್ತು ಎಸ್‌ಸಿ ಕಾಲೋನಿಗಳಲ್ಲಿ ಕರೆಂಟ್ ವ್ಯವಸ್ಥೆ ಇಲ್ಲದಿರುವುದರಿಂದ ಹೊಸ ಕಂಬಗಳನ್ನು ಹಾಕಿ ವಿದ್ಯುತ್ ಕಲ್ಪಿಸಬೇಕು. ಹಳೆಯ ಮೇನ್ ವಿದ್ಯುತ್ ಲೈನ್ ಮನೆಗಳ ಮೇಲೆ ಹಾದು ಹೋಗಿದ್ದು, ಜನರಲ್ಲಿ ಆತಂಕ ಮೂಡಿಸಿರುವುದರಿಂದ ಅದನ್ನು ಬೇರೆಡೆಗೆ ಸ್ಥಳಾಂತರಿಸಬೇಕು.
ರೈತರ ಹೊಲಗಳಿಗೆ ಹೋಗುವ ರಸ್ತೆಗಳಲ್ಲಿ ಗಿಡಗಂಟಿಗಳು ಮತ್ತು ಮುಳ್ಳುಗಳು ಬೆಳೆದಿರುವುದರಿಂದ ವಾಹನ ಹಾಗೂ ದನಕರುಗಳ ಓಡಾಟಕ್ಕೆ ದಾರಿ ಮಾಡಿಕೊಡಬೇಕು.
ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯಗಳು, ಹೆಚ್ಚುವರಿ ತರಗತಿ ಕೊಠಡಿ ಹಾಗೂ 2027-28ನೇ ಸಾಲಿನಲ್ಲಿ 9ನೇ ತರಗತಿ ಪ್ರಾರಂಭಿಸಲು ಕೊಠಡಿಗಳನ್ನು ದುರಸ್ಥಿ ಮಾಡಬೇಕು.
ಗೋಶಾಲೆ ನಿರ್ಮಾಣ: ಕನಕಗಿರಿ ತಾಲ್ಲೂಕಿನಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲ ಆವರಿಸಿದ್ದು, ದನಕರುಗಳಿಗೆ ಮೇವು ಇಲ್ಲದ ಕಾರಣ ಎಲ್ಲಾ ಹಳ್ಳಿಗಳಿಗೆ ಗೋಶಾಲೆ ನಿರ್ಮಿಸಿಕೊಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಕನಕಾಪುರ ಗ್ರಾಮ ಘಟಕದ ಅಧ್ಯಕ್ಷರಾದ ಮರಿಯಪ್ಪ ಹಗ್ಗಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರಮೇಶ, ಹನುಮಪ್ಪ, ಮರಿಯಪ್ಪ, ಲಚಮಪ್ಪ, ಬೀರಪ್ಪ ಹಾಗೂ ಸಂಘದ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
