October 7, 2026
IMG-20260916-WA0217

ಕನಕಗಿರಿ: ಸೆ 16 ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಪ್ರವೇಶ ಪರೀಕ್ಷೆ ಬರೆಯದೇ ದಾಖಲಾತಿ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ದಾಖಲಾತಿ ಪ್ರಕ್ರಿಯೆಯಲ್ಲಿ ಶಾಲೆಗೆ ಬಾಳೆಹಣ್ಣು ಮತ್ತು ಮೊಟ್ಟೆ ಪೂರೈಕೆ ಮಾಡುವ ವಿತರಕರೇ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆಯೇ? ಎಂಬ ಅನುಮಾನವೂ ವ್ಯಕ್ತವಾಗಿದೆ.ವಿದ್ಯಾರ್ಥಿನಿಯ ಪ್ರವೇಶಕ್ಕೆ ಸಂಬಂಧಿಸಿದಂತೆ ಬಾಳೆಹಣ್ಣು ಮತ್ತು ಮೊಟ್ಟೆ ವಿತರಕರ ಮೂಲಕ ಶಾಲಾ ಸಿಬ್ಬಂದಿ ಅಥವಾ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆಯೇ, ಪ್ರವೇಶ ಪ್ರಕ್ರಿಯೆಯಲ್ಲಿ ಅವರು ಯಾವುದೇ ರೀತಿಯಲ್ಲಿ ಮಧ್ಯವರ್ತಿತನ ವಹಿಸಿದ್ದಾರೆಯೇ ಎಂಬುದನ್ನು ತನಿಖೆ ಮೂಲಕ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ದಾಖಲಾತಿ ನಡೆದ ದಿನದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುವುದು, ಪ್ರವೇಶ ಅರ್ಜಿ, ಪರೀಕ್ಷೆಯ ಹಾಜರಾತಿ ಪಟ್ಟಿ, ಉತ್ತರ ಪತ್ರಿಕೆ, ಅಂಕಪಟ್ಟಿ ಹಾಗೂ ದಾಖಲಾತಿ ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.ಆರೋಪಗಳು ಸತ್ಯವೇ ಅಥವಾ ಆಧಾರರಹಿತವೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದ್ದು, ಬಾಳೆಹಣ್ಣು–ಮೊಟ್ಟೆ ವಿತರಕರ ಪಾತ್ರವಿದ್ದರೆ ಅದನ್ನೂ ತನಿಖೆಯ ವ್ಯಾಪ್ತಿಗೆ ತರಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಈ ಕುರಿತು ಶಾಲಾ ಆಡಳಿತ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದಾಖಲೆಗಳ ಆಧಾರದ ಮೇಲೆ ಸ್ಪಷ್ಟನೆ ನೀಡಬೇಕಿದೆ.

””ಕನಕಗಿರಿ ಮೌಲಾನಾ ಆಜಾದ್ ಶಾಲೆಯಲ್ಲಿ ಪ್ರವೇಶ ಪ್ರಕ್ರಿಯೆ ಕುರಿತು ಅನುಮಾನ; ಸಿಸಿ ಕ್ಯಾಮೆರಾ ಪರಿಶೀಲನೆಗೆ ಒತ್ತಾಯ ಡಿಎಸ್ ಎಸ್ ಒತ್ತಾಯ.””

Leave a Reply

Your email address will not be published. Required fields are marked *