October 7, 2026
IMG-20261003-WA0022

ಕನಕಗಿರಿ,ಅ.3-
ಕನಕಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಯಲ್ಲಿ ಕೆಲವು ದಲಾಲಿ ವರ್ತಕರು ನಿಗದಿತ ಜಮೀನಿಗಿಂತ ಹೆಚ್ಚಿನ ಭೂಮಿಯನ್ನು ಅಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ, ಮೇಲಾಧಿಕಾರಿಗಳು (ಕಲಬುರಗಿ, ಬೆಂಗಳೂರು ಹಾಗೂ ಗಂಗಾವತಿ) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರೂ ಸಹ, ಕನಕಗಿರಿ ಎಪಿಎಂಸಿ ಕಾರ್ಯದರ್ಶಿಗಳು ಕ್ರಮ ಜರುಗಿಸದೆ ಕಾಲಹರಣ ಮಾಡುತ್ತಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಗಣೇಶ ರೆಡ್ಡಿಯವರಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಕನಕಗಿರಿ ಎಪಿಎಂಸಿ ಆವರಣದಲ್ಲಿ ನಿಯಮ ಮೀರಿ ಹೆಚ್ಚು ಭೂಮಿಯಲ್ಲಿ 10ಕ್ಕೂ ಹೆಚ್ಚು ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಬೆಂಗಳೂರು, ಕಲಬುರಗಿ ಹಾಗೂ ಗಂಗಾವತಿಯ ಮೇಲಾಧಿಕಾರಿಗಳು ಈ ಅಕ್ರಮದ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಸ್ಥಳೀಯ ಎಪಿಎಂಸಿ ಕಾರ್ಯದರ್ಶಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿ ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ಮೇಲಾಧಿಕಾರಿಗಳ ಆದೇಶವನ್ನು ಜಾರಿಗೆ ತರಲು ವಿಳಂಬ ಮಾಡುತ್ತಿರುವ ಹಾಗೂ ಅಕ್ರಮ ಮಳಿಗೆಗಳ ವಿರುದ್ಧ ಮೌನ ವಹಿಸಿರುವ ಎಪಿಎಂಸಿ ಕಾರ್ಯದರ್ಶಿಗಳ ಧೋರಣೆಯನ್ನು ಖಂಡಿಸಿ, ಈ ಕೂಡಲೇ ಶ್ರೀ ಸುವರ್ಣಗಿರಿ ಸೌಹಾರ್ದ ಪತ್ತಿನ ಸಹಕಾರ ನಿಯಮಿತ ಕನಕಗಿರಿ, ಶ್ರೀ ರಾಘವೇಂದ್ರ ಸ್ವಾಮಿ ಪರ್ಟಿ ಲೈಜರ್ಸ್ ಕನಕಗಿರಿ, ಶ್ರೀ ಲಕ್ಷ್ಮಿ ಟೆಡಿಂಗ್ ಕಂಪನಿ ಕನಕಗಿರಿ, ಶ್ರೀ ದುರ್ಗಾ ಟ್ರೇಡಿಂಗ್ ಕಂಪನಿ ಕನಕಗಿರಿ, ಶ್ರೀ ಲಕ್ಷ್ಮಿ ನರಸಿಂಹ ಟ್ರೇಡರ್ಸ್ ಮುಸಲಾಪುರ, ಕನಕಗಿರಿ, ಶ್ರೀ ಬಸವೇಶ್ವರ ಟ್ರೇಡಿಂಗ್ ಕಂಪನಿ ಕನಕಗಿರಿ, ಶ್ರೀಶೈಲ ಮಲ್ಲಿಕಾರ್ಜುನ ಇಂಡಸ್ಟ್ರೀಸ್ ಕನಕಗಿರಿ, ಶ್ರೀ ಬೀರೇಶ್ವರ ಟ್ರೇಡರ್ಸ್ ಕನಕಗಿರಿ, ಶ್ರೀ ಮಂಜುಶ್ರೀ ಆಗ್ರೋ ಏಜೆನ್ಸಿ ಕನಕಗಿರಿ, ಶ್ರೀ ಕಾಲಕಾಲೇಶ್ವರ ಟ್ರೇಡಿಂಗ್ ಕಂಪನಿ ಕನಕಗಿರಿ, ಶ್ರೀ ಗುರು ಸಿದ್ದರಾಮೇಶ್ವರ ಟ್ರೇಡಿಂಗ್ ಕಂಪನಿ ಕನಕಗಿರಿ, ಇನ್ನು ಮುಂತಾದ ಅಂಗಡಿಗಳ ಅಕ್ರಮದ ವಿರುದ್ಧ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಹಶೀಲ್ದಾರರಿಗೆ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಲಾಯಿತು.
​ಈ ಅಕ್ರಮ ಒತ್ತುವರಿಯ ಹಿಂದೆ ಪ್ರಭಾವಿಗಳ ಕೈವಾಡವಿದೆಯೆ? ಎಂಬ ಶಂಕೆ ವ್ಯಕ್ತವಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕಾನೂನು ಕ್ರಮ ಜರುಗಿಸಬೇಕು, ವಿಳಂಬವಾದರೆ, ಕರ್ನಾಟಕದ ಎಲ್ಲಾ ಜಿಲ್ಲೆಯ ರೈತರನ್ನು ಕರೆಸಿ, ಕನಕಗಿರಿ ಎಪಿಎಂಸಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಗಣೇಶ ರೆಡ್ಡಿಯವರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *