October 7, 2026
IMG-20261002-WA0028

ಗಂಗಾವತಿ,ಅ,2-
ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಇವರಿಬ್ಬರು ಸರಳವಾದ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ ಅವರು ಹೇಳಿದರು.
ನಗರದ ಶ್ರೀ ಕೊಲ್ಲಿ ನಾಗೇಶ್ವರ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರ ಹೋರಾಟದ ತತ್ವಗಳಿಂದ ಪ್ರೇರಣೆಗೊಂಡು ಪ್ರಪಂಚದಲ್ಲಿ ಸುಮಾರು 157 ದೇಶಗಳು ಸ್ವಾತಂತ್ರಗೊಂಡು ಪ್ರಜಾಸತ್ತಾತ್ಮಕ ರಾಷ್ಟ್ರಗಳಾಗಿವೆ.
ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜೈ ಜವಾನ್, ಜೈ ಕಿಸಾನ್ ಬಹಳ ಅರ್ಥಗರ್ಭಿತ ಘೋಷಣೆ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೃಷ್ಣ ಅವರು ಮಾತನಾಡುತ್ತ ಮಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿ ಮತ್ತು ಸತ್ಯಗ್ರಹ ಹೋರಾಟವು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಉಮಾಕಾಂತ ಅವರೆಡ್ಡಿ ಅವರು ಗಾಂಧೀಜಿಯವರು ಸತ್ಯ, ಶಾಂತಿ ಮತ್ತ್ತು ಅಹಿಂಸಾತ್ಮಕ ಸಂದೇಶಗಳನ್ನು ನಮ್ಮ ದೇಶಕ್ಕೆ ನೀಡಿದ್ದಾರೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ತೆ ಡಾ.ಮುಮ್ತಾಜ್ ಬೇಗಂ ಅವರು ಮಾತನಾಡುತ್ತ ಮಹಾತ್ಮಾ ಗಾಂಧೀಜಿಯವರ ತತ್ವಗಳು, ಆದರ್ಶಗಳು ಮತ್ತು ಮಾನವೀಯ ಮೌಲ್ಯಗಳನ್ನು ನಾವೆಲ್ಲ ಅಳವಡಿಸಿಕೊಳ್ಳೋಣ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಬಾರಿಕೇರಿ ಫಣಿರಾಜು ಅವರು ಮಾತನಾಡುತ್ತ ಗಾಂಧೀಜಿಯವರು ಹುಟ್ಟಿದ ದಿನವನ್ನು ವಿಶ್ವ ಸಂಸ್ಥೆಯು ಅಹಿಂಸಾತ್ಮಕ ದಿನ ಎಂದು ಆಚರಣೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶಿಲ್ಪಾ ಕುಲಕರ್ಣಿ,ಡಾ. ಅನ್ನಪೂರ್ಣ ಗುಡಾದೂರು. ರಾಗಮ್ಮ, ರವಿ ಹಾದಿಮನಿ, ಅನಿಲ್ ಕುಮಾರ್, ಡಾ.ದೊರೆಬಾಬು, ಅಶ್ರಫ್ ಅಳ್ಳಳ್ಳಿ, ಅಕ್ಕಿ ಮಾರುತಿ, ಮೆಹತಾಬ್ ಅಂಜಿಮ್, ರವಿ ಕುಮಾರ್, ಮಲ್ಲಿಕಾರ್ಜುನ, ಡಾ. ಅಶೋಕ ಕುಮಾರ, ಭೂಮಿಕಾ, ಸಲೀಮ್ ಮಹ್ಮದ್, ಡಾ ಸೃಷ್ಟಿ ಮತ್ತು ಮಣಿಕಂಠ ಹಂಗಳ, ಸೇರಿದಂತೆ ಕಾಲೇಜಿನ ಭೋಧಕ ಭೋದಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *