October 7, 2026
Oplus_16908288

Oplus_16908288

ಕನಕಗಿರಿ,ಸೆ,24-
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಕನಕಗಿರಿ ಇದರ 46ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ, 24, 2026 ಗುರುವಾರದಂದು ಅತ್ಯಂತ ಯಶಸ್ವಿಯಾಗಿ ಸಂಘದ ಅಧ್ಯಕ್ಷರಾದ ಬಿ. ಕನಕಪ್ಪ ಚಲವಾದಿಯವರ ಅಧ್ಯಕ್ಷತೆಯಲ್ಲಿ ಈ ಮಹಾಸಭೆಯು ಜರುಗಿತು.

*ಸಂಘದ ಪ್ರಮುಖ ವಿವರಗಳು:*
ಈ ಸಹಕಾರ ಸಂಘವು ಕನಕಗಿರಿಯಲ್ಲಿ ನೋಂದಣಿ ಸಂಖ್ಯೆ: ಉ. ನೋಂ. ರಾ. ಸ. 8 ಆ. ಜ. ಎನ್. ಸ. 4967/12-3-1981 ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ದೀರ್ಘಕಾಲದಿಂದ ರೈತ ಪರ ಸೇವೆಗಳನ್ನು ಸಲ್ಲಿಸುತ್ತಾ ಬಂದಿದ್ದು, “ಎಲ್ಲರೂ ಒಬ್ಬನಿಗಾಗಿ, ಒಬ್ಬನು ಎಲ್ಲರಿಗಾಗಿ” ಎನ್ನುವ ಸಹಕಾರ ತತ್ವದಡಿಯಲ್ಲಿ ಈ ಸಂಘವು ಕಾರ್ಯನಿರ್ವಹಿಸುತ್ತಿದೆ.
ಸಭೆಯಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ, ರೈತರ ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಿದರು. ಸಭೆಯಲ್ಲಿ ಸ್ಥಳೀಯ ರೈತರು ಮತ್ತು ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

*ಕನಕಗರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 46ನೇ ವರ್ಷದ 2025-2026ನೇ ಸಾಲಿನ ವಾರ್ಷಿಕ ವರದಿಯ ಮಂಡನೆ.*
ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ಲಾಭವಾಗಿದ್ದು, ನಿವ್ವಳ ಲಾಭವು 10,60,466=50 ರೂ.ಗಳಷ್ಟಿದೆ. ಮುಂದಿನ ವರ್ಷದಲ್ಲಿ ಹೆಚ್ಚಿನ ಸಾಲ ವಿತರಣೆ ಮಾಡುವ ಉದ್ದೇಶವಿದ್ದು, ಸದಸ್ಯರು ಪಡೆದ ಲಾಭವನ್ನು ಕಾಲಮಿತಿಯಲ್ಲಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಸಹಕಾರ ಸಂಘದ ಅಧ್ಯಕ್ಷರಾದ ಬಿ. ಕನಕಪ್ಪ ಚಲುವಾದಿ ಕೋರಿದರು. ಈ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ವಿಜಯಕುಮಾರ ತೆಗ್ಗಿನಮನಿ ಹಾಗೂ ಅಧ್ಯಕ್ಷರಾದ ಬಿ. ಕನಕಪ್ಪ ಚಲುವಾದಿಯವರ ನೇತೃತ್ವದಲ್ಲಿ ಕಾರ್ಯಕಾರಿ ಮಂಡಳಿಯ ಪರವಾಗಿ ಮಂಡಿಸಿದ್ದು, ಸಹಕಾರ ಇಲಾಖೆ ಮತ್ತು ಆರ್.ಕೆ.ಡಿ.ಸಿ. ಬ್ಯಾಂಕ್ ರಾಯಚೂರು ಹಾಗೂ ಕನಕಗಿರಿ ಅಧಿಕಾರಿಗಳ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

*ಮುಂದಿನ ಸಾಲಿನ ಮುಂಗಡ ಪತ್ರ:*
ಸಂಘದ 2025-2026ರ ಲೆಕ್ಕ ಪತ್ರಗಳನ್ನು ಹಾಗೂ 2026-2027ನೇ ಸಾಲಿನ ಮುಂಗಡ ಪತ್ರವನ್ನು ಮಂಜೂರು ಮಾಡುವಂತೆ ಕೋರಲಾಯಿತು.

*ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಕನಕಗಿರಿ ಇದರ 2025-2026ನೇ ಸಾಲಿನ ಆರ್ಥಿಕ ಹಾಗೂ ವಾರ್ಷಿಕ ಪ್ರಗತಿಯ ಪ್ರಮುಖ ವಿವರಗಳು:*
ಈ ಸಹಕಾರ ಸಂಘದ ಒಟ್ಟು ಷೇರು ಬಂಡವಾಳವು 77,60,831=00 ರೂ.ಗಳಷ್ಟಿದ್ದು, ವಿವಿಧ ನಿಧಿಗಳ ಒಟ್ಟು ಮೊತ್ತವು 47,27,547=03 ರೂ.ಗಳನ್ನು ಹೊಂದಿದೆ. ಸದಸ್ಯರ ವಿವಿಧ ಸಾಲಗಳು ಮತ್ತು ಸಹಾಯಧನಗಳ ಅಡಿಯಲ್ಲಿ ಒಟ್ಟು 5,03,25,000=00 ರೂ.ಗಳ ವ್ಯವಹಾರವಿರುತ್ತದೆ.

*ವ್ಯಾಪಾರ, ಲಾಭ ಮತ್ತು ಹಾನಿ:*
ಸಂಘದ ವ್ಯಾಪಾರ ಪತ್ರಿಕೆಯ ಪ್ರಕಾರ ಒಟ್ಟು ವ್ಯಾಪಾರ ಮೊತ್ತ 16,61,961=00 ರೂ.ಗಳಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಂಘವು ಒಟ್ಟು 10,60,466=50 ರೂ. ಗಳ ನಿವ್ವಳ ಲಾಭವನ್ನು ಗಳಿಸಿದೆ.

*ಮುಂದಿನ ವರ್ಷದ ಯೋಜನೆ (2026-2027):* ಮುಂಬರುವ ಸಾಲಿನಲ್ಲಿ ಸದಸ್ಯರಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಣೆ ಮಾಡಲು ಮತ್ತು ಸಂಘದ ಆರ್ಥಿಕ ಶಕ್ತಿಯನ್ನು ಮತ್ತಷ್ಟು ವಿಸ್ತರಿಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಾದ ವಿಜಯಕುಮಾರ ತೆಗ್ಗಿಮನಿ (M.Com), ಹಾಗೂ ಉಪಾಧ್ಯಕ್ಷ ಮಹಾಂತೇಶ ಕೊಡ್ಲಿ ಸೇರಿದಂತೆ ಕಾರ್ಯಕಾರಿ ಮಂಡಳಿಯ ನಿರ್ದೇಶಕರಾದ ಶರಣಬಸಪ್ಪ ಕಲೀಕೇರಿ, ಕನಕರೆಡ್ಡಿ ಕೆರಿ, ರಾಘವೇಂದ್ರ ಚಿತ್ರಗಾರ, ಸಿಂಧುಬಲ್ಲಾಳ ಕುಂಬಾರ, ದುರುಗೇಶ ಗಂಗಾಮತ, ಅಮರೇಶ ಭಾವಿಕಟ್ಟಿ, ಸಣ್ಣ ರಾಮಣ್ಣ ಬ್ಯಾಳಿ, ಸಂಗಪ್ಪ ಹೂಗಾರ, ವನಜಾಕ್ಷಿ ಆಗೋಲಿ, ಶರಣಮ್ಮ ಸಜ್ಜನ, ಮತ್ತು ಸಿಬ್ಬಂದಿ ವರ್ಗದವರಾದ ಅಕೌಂಟೆಂಟ್ ಮಂಜುನಾಥ ರೆಡ್ಡಿ ಮಾದಿನಾಳ, ಕಂಪ್ಯೂಟರ್ ಆಪರೇಟರ್ ಸೆಕ್ಷಾವಲಿ ಬಿಳೆಕುದುರಿ, ಮಾರಾಟ ಗುಮಾಸ್ತ ಪರಶುರಾಮ ಚಲವಾದಿ, ಸೇವಕ ವೀರೇಶ್ ಚಿನ್ನಿ ಸೇರಿದಂತೆ, ಊರಿನ ಮುಖಂಡರು, ಸ್ಥಳೀಯ ರೈತರು ಮತ್ತು ಸಂಘದ ಸದಸ್ಯರು, ಬ್ಯಾಂಕ್ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *