October 7, 2026
Picsart_26-09-22_01-11-49-214

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ಕನಕಗಿರಿ,ಸೆ.22-
ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತದಲ್ಲಿ ‘ಚಾರ್ಜ್’ ವಿಚಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಶಾಶ್ವತ ಮುಖ್ಯಶಿಕ್ಷಕರಾಗಿ ನೇಮಕಗೊಂಡಿರುವ ಅನ್ನಪೂರ್ಣ ಅವರಿಗೆ ಸಂಪೂರ್ಣ ಅಧಿಕಾರ ಹಸ್ತಾಂತರಿಸದೆ, ಪ್ರಭಾರಿ ಮುಖ್ಯಶಿಕ್ಷಕರ ಮೂಲಕವೇ ಆಡಳಿತ ನಡೆಯುತ್ತಿದೆ ಎಂದು ದಲಿತ ಮುಖಂಡ ಪಮಣ್ಣ ಅರಳಿಗನೂರು ಆರೋಪಿಸಿದ್ದು, ಶಿಕ್ಷಣ ಇಲಾಖೆ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರು ತಿಂಗಳಿಂದ ಸಮಸ್ಯೆ ಮುಂದುವರಿದಿದ್ದರೂ ಪರಿಹಾರ ಏಕೆ ಇಲ್ಲ? ಎಂಬ ಪ್ರಶ್ನೆಯನ್ನು ಮುಖಂಡರು ಎತ್ತಿದ್ದಾರೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಿಂದೆಯೇ ದೂರು ನೀಡಿ, ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಾಶ್ವತ ಮುಖ್ಯಶಿಕ್ಷಕರಿಗೆ ಸಂಪೂರ್ಣ ಚಾರ್ಜ್ ನೀಡುವಂತೆ ಮನವಿ ಮಾಡಿದ್ದರೂ ಸೂಕ್ತ ಕ್ರಮವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಶಾಲೆಯ ಮೂಲ ಕಡತಗಳು, ಮಕ್ಕಳ ರಿಜಿಸ್ಟರ್‌ಗಳು ಹಾಗೂ ಇತರ ಪ್ರಮುಖ ದಾಖಲೆಗಳ ನಿರ್ವಹಣೆ ಕುರಿತು ಸ್ಪಷ್ಟತೆ ಅಗತ್ಯವಿದೆ. ಅಲ್ಲದೆ ಗ್ಯಾಸ್, ಅಡುಗೆ ಎಣ್ಣೆ, ಹಿಂದಿನ ಸಾಲಿನ ಶೈಕ್ಷಣಿಕ ಅನುದಾನದಿಂದ ಖರೀದಿಸಿದ ಸಾಮಗ್ರಿಗಳು ಮತ್ತು ಕ್ರೀಡಾ ಸಾಮಗ್ರಿಗಳ ಲಭ್ಯತೆ ಹಾಗೂ ಬಳಕೆಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
“ಸಾಮಗ್ರಿಗಳು ನಿಜವಾಗಿಯೂ ಎಲ್ಲಿವೆ? ಅನುದಾನ ಹೇಗೆ ಬಳಕೆಯಾಗಿದೆ?” ಎಂಬುದಕ್ಕೆ ದಾಖಲೆಗಳ ಮೂಲಕ ಉತ್ತರ ಸಿಗಬೇಕು. ಶಾಲೆಯ ದಾಸ್ತಾನು ಪುಸ್ತಕ, ಖರೀದಿ ಬಿಲ್‌ಗಳು, ವಿತರಣೆ ದಾಖಲೆಗಳು ಹಾಗೂ ಅನುದಾನದ ಬಳಕೆ ವಿವರಗಳನ್ನು ಪರಿಶೀಲಿಸಿದರೆ ಮಾತ್ರ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ ಎಂದು ಮುಖಂಡರು ಹೇಳಿದ್ದಾರೆ.
ಇದರ ಮಧ್ಯೆ ಪ್ರಭಾರಿ ಮುಖ್ಯಶಿಕ್ಷಕ ಸಂಗಮೇಶ ಹಿರೇಮಠ ಅವರ ಕರ್ತವ್ಯ ನಿರ್ವಹಣೆ ಬಗ್ಗೆಯೂ ಗಂಭೀರ ಆರೋಪಗಳು ಕೇಳಿಬಂದಿವೆ. ಅವರು ಮದ್ಯಪಾನ ಮಾಡಿ ಶಾಲೆಗೆ ಬರುತ್ತಾರೆ ಎಂಬ ಆರೋಪವನ್ನು ದಲಿತ ಮುಖಂಡರು ಮಾಡಿದ್ದಾರೆ. ಈ ಆರೋಪ ಸತ್ಯವೇ ಅಥವಾ ಸುಳ್ಳೇ ಎಂಬುದನ್ನು ಇಲಾಖೆಯೇ ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶಾಲೆಯಲ್ಲಿ ಜಾತಿ ಆಧಾರಿತ ತಾರತಮ್ಯ ನಡೆಯುತ್ತಿದೆ ಎಂಬ ಆರೋಪಗಳನ್ನೂ ಮುಖಂಡರು ಮುಂದಿಟ್ಟಿದ್ದಾರೆ. ಇಂತಹ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಯಾವುದೇ ಪೂರ್ವಗ್ರಹವಿಲ್ಲದೆ ಪರಿಶೀಲನೆ ನಡೆಸಬೇಕು. ಆರೋಪ ಸಾಬೀತಾದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಶಾಲೆಯ ಆಡಳಿತ ಯಾರ ನಿಯಂತ್ರಣದಲ್ಲಿದೆ? ಶಾಶ್ವತ ಮುಖ್ಯಶಿಕ್ಷಕರಿಗೆ ಪೂರ್ಣ ಚಾರ್ಜ್ ಏಕೆ ನೀಡಲಾಗಿಲ್ಲ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಶಿಕ್ಷಣ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ದಲಿತ ಮುಖಂಡ ಶೇಷಪ್ಪ ಪೂಜಾರಿ, “ಸುಮಾರು ಆರು ತಿಂಗಳ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದಿದ್ದೇವೆ. ಶಾಲೆಯ ದಾಖಲೆ, ಸಾಮಗ್ರಿ ಹಾಗೂ ಆಡಳಿತವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಶಾಶ್ವತ ಮುಖ್ಯಶಿಕ್ಷಕರಿಗೆ ಪೂರ್ಣ ಚಾರ್ಜ್ ನೀಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ” ಎಂದು ಎಚ್ಚರಿಸಿದರು.
“ಪರಿಶೀಲನೆ ನಡೆಸದಿದ್ದರೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ” ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರುವ ಮುನ್ನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮೇಲಧಿಕಾರಿಗಳು ಶಾಲೆಗೆ ಭೇಟಿ ನೀಡಿ ದಾಖಲೆ, ದಾಸ್ತಾನು, ಅನುದಾನ ಮತ್ತು ಆಡಳಿತ ವ್ಯವಸ್ಥೆಯನ್ನು ಪರಿಶೀಲಿಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕಿದೆ ಎಂದು ಹೇಳಿದರು.
ನಂತರ ಮಾತನಾಡಿದ ಪ್ರಭಾರಿ ಮುಖ್ಯ ಶಿಕ್ಷಕ ಸಂಗಮೇಶ ಹಿರೇಮಠ ಇನೂ ಎರಡು ಮೂರು ದಿನದಲ್ಲಿ ಶಾಶ್ವತ ಮುಖ್ಯಶಿಕ್ಷಕಿ ಅನ್ನಪೂರ್ಣರವರಿಗೆ ಸಂಪೂರ್ಣ ಚಾರ್ಜ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ Eco ಶ್ರೀಕಾಂತ್, ಧನಂಜಯ, ಸಂಗೀತ ಶಿಕ್ಷಕಿ ಗೀತಾ, sdmc ಸದಸ್ಯರಾದ ಹನುಮಂತ ರೆಡ್ಡಿ, ನೀಲಕಂಠ ಬಡಿಗೇರ್, ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *