October 7, 2026
IMG-20260912-WA0184

*ಕನಕಗಿರಿ : ಶ್ರೀ ಹಾಲಸಿದ್ದೇಶ್ವರ ಮಠದಲ್ಲಿ ಶ್ರಾವಣ ಸಂಭ್ರಮ; ವಿಶೇಷ ಪೂಜೆ, ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ.*

*ಕನಕಗಿರಿ,ಸೆ.12
ಪಟ್ಟಣದ ಶ್ರೀ ಹಾಲಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ಯ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ನಂತರ ಮಾತನಾಡಿದ ಹಾಲಸಿದ್ದೇಶ್ವರ ಮಠದ ಶ್ರೀಗಳಾದ ಶ್ರೀ ವೇದಮೂರ್ತಿ ಸೋಮಶೇಖರಯ್ಯ ಸ್ವಾಮಿ ಹಿರೇಮಠರವರು ಶ್ರೀ ಮಠದ ಉಗಮ ಹಾಗೂ ಕ್ಷೇತ್ರದ ಭವ್ಯ ಪರಂಪರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹಾಲಸಿದ್ದೇಶ್ವರ ಶ್ರೀಗಳು ಹುಟ್ಟಿದ್ದು ಅಥವಾ ಅವತರಿಸಿದ್ದು ಮೂಲ ರಾಂಪುರ ಎಂಬ ಗ್ರಾಮದಲ್ಲಿ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಬರುತಿತ್ತು, ಆದರೆ ಈಗ ಶಿವಮೊಗ್ಗದಲ್ಲಿ ಬರುತ್ತದೆ, ಹಾಗೂ ಅವರು ಕನಕಗಿರಿಯಲ್ಲಿ ಲಿಂಗೈಕ್ಯರಾಗಿದ್ದು, ಇದು ಮೂಲ ಮಠವಾಗಿದ್ದು ಇನ್ನೂ ಹಲವಾರು ಶಾಖಾ ಮಠಗಳಿವೆ ಎಂದು ತಿಳಿಸಿದರು.
ಕನಕಗಿರಿಯಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಕಾಲ ಸ್ವಾಮಿಗೆ ವಿಶೇಷ ಪೂಜೆ ಪಂಚಾಮೃತ ಅಭಿಷೇಕ, ಬಿಲ್ವಪತ್ರೆ ಅರ್ಚನೆ, ಕುಂಕುಮಾರ್ಚನೆ, ಪುಷ್ಪಾಲಂಕಾರ, ನೆರವೇರಿಸಲಾಯಿತು. ಶ್ರಾವಣದ ಕೊನೆಯ ದಿನದಂದು ಸಿಹಿ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಯಿತು.
*ಮೂರು ಜೀವಂತ ಸಮಾಧಿಗಳ ಸಂಗಮ :*
ಕನಕಗಿರಿ ಕ್ಷೇತ್ರವು ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿದ್ದು, ಇಲ್ಲಿ ಮೂರು ಪವಿತ್ರ ಜೀವಂತ ಸಮಾಧಿಗಳಿವೆ. ಶ್ರೀ ಹಾಲಸಿದ್ದೇಶ್ವರ ಶ್ರೀಗಳ ಮೂಲ ಕರ್ತೃ ಗದ್ದಿಗೆಯೊಂದಿಗೆ, ಚಿದಾನಂದ ಅವಧೂತರ ಗದ್ದಿಗೆ ಹಾಗೂ ಸುವರ್ಣಗಿರಿ ವಿರಕ್ತ ಮಠದ ಗದ್ದಿಗೆಗಳು ಈ ಕ್ಷೇತ್ರದ ಪುಣ್ಯಶಕ್ತಿಯನ್ನು ದ್ವಿಗುಣಗೊಳಿಸಿವೆ. ಹಾಲ ಸಿದ್ದೇಶ್ವರ ಮಠ ಗದ್ದಿಗೆಯೂ ಸರಿ ಸುಮಾರು 900 ವರ್ಷದ ಇತಿಹಾಸ ಹೊಂದಿರುವ ಮಠವಾಗಿದೆ, ಹಾಲಸಿದ್ದೇಶ್ವರ ಶ್ರೀಗಳ ಮೂಲ ಕರ್ತೃ ಗದ್ದಿಗೆ ಕನಕಗಿರಿಯಲ್ಲಿದ್ದು, ಮೂರು ಜೀವಂತ ಸಮಾಧಿಗಳಲ್ಲಿ ಇದು ಕೂಡ ಒಂದಾಗಿದೆ ಎಂದರು.
ಶ್ರಾವಣ ಮಾಸದ ಕೊನೆಯ ದಿನದ ಮುಕ್ತಾಯ ಸಮಾರಂಭದ ಅಂಗವಾಗಿ ಮಹಾಮಂಗಳಾರತಿ ನೆರವೇರಿಸಿ, ಬಳಿಕ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ವಿಶೇಷ ಸಿಹಿ ಭೋಜನ ಹಾಗೂ ಬೃಹತ್ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕನಕಗಿರಿ ಪಟ್ಟಣದ ಚಂದ್ರಶೇಖರ್ ಹಡಪದ, ಶಿವಪ್ಪ ಬಾವಿಕಟ್ಟಿ, ಸಂಗಪ್ಪ ತಗ್ಗಿನಮನಿ, ಚೆನ್ನಯ್ಯ ಸ್ವಾಮಿ ಮೈಲಾಪುರ ಹಿರೇಮಠ, ಶೇಖರಪ್ಪ ಬಾವಿಕಟ್ಟಿ, ಮಂಜುನಾಥ್ ರೆಡ್ಡಿ ಮಾದಿನಾಳ, ಶೈಲಾನ್ ಬಾಷಾ ಎಲೆಗಾರ, ವಿಜಯ ಭಾಸ್ಕರ್, ಖಾದರಭಾಷಾ, ವೀರೇಶ್ ದೇವಲಾಪುರ ಮಠ, ಈಶ್ವರಯ್ಯ ಟಿಎಂ, ವಿಶ್ವನಾಥ್ ಎಂ ಹೆಚ್, ಹಾಗೂ ನೂರಾರು ಪ್ರಮುಖರು ಮತ್ತು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಸಾರ್ವಜನಿಕರು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.

Leave a Reply

Your email address will not be published. Required fields are marked *