October 7, 2026
IMG-20260910-WA0073

ಕೊಪ್ಪಳ: ಸೆ 10 ಜಿಲ್ಲಾ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರನ್ನು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೆ.9ರಂದು ಕರ್ನಾಟಕದ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ನೇಮಕಾತಿಗೆ ಅನುಮೋದನೆ ನೀಡಿದ್ದು, ನೇಮಕಾತಿಗಳು ತಕ್ಷಣದಿಂದ ಜಾರಿಗೆ ಬರಲಿವೆ ಎಂದು ಪ್ರಕಟಿಸಿದೆ. �
Facebook
‘ಸಂಘಟನ್ ಸೃಜನ ಅಭಿಯಾನ’ದಡಿ AICC ವೀಕ್ಷಕರು ಜಿಲ್ಲಾಮಟ್ಟದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಿದ್ದರು. ಈ ವರದಿಗಳು ಹಾಗೂ ಹಿರಿಯ ನಾಯಕರೊಂದಿಗಿನ ಚರ್ಚೆಯ ಬಳಿಕ ಜಿಲ್ಲಾ ಅಧ್ಯಕ್ಷರ ನೇಮಕಾತಿ ಅಂತಿಮಗೊಳಿಸಲಾಗಿದೆ.
ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಜಿಲ್ಲಾ ಕಾಂಗ್ರೆಸ್‌ನ ಸಾರಥ್ಯ ದೊರೆತಿರುವುದು ಕೊಪ್ಪಳ ಜಿಲ್ಲೆಯ ಪಕ್ಷದ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಎಂದೇ ಪರಿಗಣಿಸಲಾಗಿದೆ. ಪಕ್ಷದ ವಿವಿಧ ಘಟಕಗಳನ್ನು ಒಗ್ಗೂಡಿಸುವುದು, ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ಹಾಗೂ ಮುಂಬರುವ ಚುನಾವಣೆಗಳಿಗೆ ಸಂಘಟನೆಯನ್ನು ಸಜ್ಜುಗೊಳಿಸುವುದು ನೂತನ ಅಧ್ಯಕ್ಷರ ಮುಂದಿರುವ ಪ್ರಮುಖ ಸವಾಲುಗಳಾಗಿವೆ.
ಹೈಕಮಾಂಡ್‌ನ ಮುದ್ರೆಯೊಂದಿಗೆ ನಾಗಪ್ಪ ಅವರ ಹೊಸ ಜವಾಬ್ದಾರಿ ಆರಂಭವಾಗಿದ್ದು, ಕೊಪ್ಪಳ ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಸಂಘಟನಾ ಬದಲಾವಣೆಗಳು ನಡೆಯಲಿವೆ ಎಂಬುದು ಇದೀಗ ಕುತೂಹಲ ಮೂಡಿಸಿದೆ. 

Leave a Reply

Your email address will not be published. Required fields are marked *