ಯಲಗಟ್ಟಾದಲ್ಲಿ 65ನೇ ವರ್ಷದ ಜಾತ್ರಾ ಮಹೋತ್ಸವ
ವರದಿ ಚನ್ನಬಸಪ್ಪ
ಲಿಂಗಸಗೂರು: ಸೆ:9. ತಾಲೂಕಿನ ಯಲಗಟ್ಟಾ ಗ್ರಾಮದಲ್ಲಿ ಓಂ ಸದ್ಗುರು ರಾಜ್ಯಯೋಗಿ ಶ್ರೀ ಘಡವಡಿಕೇಶ್ವರ ತಾತನವರ 65ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಹಟ್ಟಿ ಚಿನ್ನದ ಗಣಿ ಸಮೀಪದ ರೋಡಲಬಂಡ ತವಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಗಟ್ಟಾದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜಾತ್ರೆ ನೆರವೇರಿತು. ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಭಾಗವಹಿಸಿ ಶ್ರೀ ಮಾರುತೇಶ್ವರ ಹಾಗೂ ವಡಿಕೇಪ್ಪ ತಾತನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ತಾತನವರ ಕೃಪೆ ಕ್ಷೇತ್ರದ ಜನರ ಮೇಲಿರಲಿ, ಎಲ್ಲರಿಗೂ ಸುಖ-ಸಮೃದ್ಧಿ ದೊರೆಯಲಿ ಎಂದು ಹೂಲಗೇರಿ ಪ್ರಾರ್ಥಿಸಿದರು.
ಜಾತ್ರೆಯ ಅಂಗವಾಗಿ ನಡೆದ ಶ್ರೀ ಲಕ್ಷ್ಮೀದೇವಿ ಹುಚ್ಚಯ್ಯ ಹೇಳುವ ಕಾರ್ಯಕ್ರಮ ಹಾಗೂ ಮಹಿಳೆಯರಿಂದ ನಡೆದ ‘ಹುಚ್ಚಯ್ಯ ಮಿಣಿ ಜಗ್ಗುವ’ ವಿಶೇಷ ಧಾರ್ಮಿಕ ಆಚರಣೆಗಳು ಭಕ್ತರ ಗಮನ ಸೆಳೆದವು.
ಮಠದ ಪೂಜ್ಯ ತಾತನವರು, ಕಕ್ಕೇರಿ ಸೋಮನಾಥೇಶ್ವರ ನಂದಣ್ಣ ತಾತನವರು, ಲಕ್ಷ್ಮಣಯ್ಯ ಗುರುಸ್ವಾಮಿ, ಶಂಕರಲಿಂಗ, ಭೀಮೇಶ್ ತಾತ, ಲಿಂಗಸಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಿವಣ್ಣ ನಾಯಕ, ಮಾಜಿ ಜಿ.ಪಂ. ಸದಸ್ಯ ಸಂಗಣ್ಣ ದೇಸಾಯಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
