*ಕನಕಗಿರಿ : ಸಡಗರ ಸಂಭ್ರಮದಿಂದ ನಡೆದ ಹಿರೇ ಹಳ್ಳದ ಬಸವೇಶ್ವರ ಜಾತ್ರೆ.*
*ಕನಕಗಿರಿ :* ಸೆ 7
ಪಟ್ಟಣದ ಲಕ್ಷ್ಮಿ ದೇವಿ ಕೆರೆ ಹತ್ತಿರದಲ್ಲಿರುವ ಹಿರೇ ಹಳ್ಳದ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೆ ಸೋಮವಾರದಂದು ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.
ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಹಿರೇ ಹಳ್ಳದ ಬಸವೇಶ್ವರ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಪತ್ರೆ, ಪುಷ್ಪ, ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಮಧ್ಯಾಹ್ನ ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ 4:00 ಗಂಟೆ ಯಿಂದ ಮುಂಗೈ ಆಟ, ನಂದಿಕೋಲು ಕುಣಿತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆಸಿ ಈ ವೇಳೆ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರಿಗೆ ಕಾಯಿ, ಕರ್ಪುರ ಮಾಡಿಸಿ ದೇವರ ಕೃಪೆಗೆ ಪಾತ್ರರಾದರು.
ಪಟ್ಟಣ ಸೇರಿದಂತೆ ಸುತ್ತಮುತ್ತ ಹಳ್ಳಿಯ, ಭಕ್ತರು ಭಾಗವಹಿಸಿದ್ದರು.
