October 7, 2026
IMG-20260905-WA0126

*ಸಹಸ್ರಾರು ಭಕ್ತರಿಂದ ಅದ್ಧೂರಿ ಆಚರಣೆ – ಜೈ ಶ್ರೀರಾಮ್ ಘೋಷಣೆ ಮೊಳಗಿದ ವಾತಾವರಣ.*

*ಕನಕಗಿರಿ :* ಪಟ್ಟಣದ ಹೊರ ವಲಯದಲ್ಲಿರುವ, ಇಷ್ಟ ದೇವರಾದ ಶ್ರೀ ತೊಂಡಿತೇವರಪ್ಪ ಸ್ವಾಮಿ, ಕಂಠೀರಂಗನ ರಥೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರದ್ಧಾ-ಭಕ್ತಿಯಿಂದ ಹಾಗೂ ಅತ್ಯಂತ ವೈಭವದಿಂದ ಜರುಗಿತು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ನೆರವೇರಿಸಲಾಯಿತು. ಬಳಿಕ ದೇವಸ್ಥಾನದ ಕಮಿಟಿ ವತಿಯಿಂದ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ರಥೋತ್ಸವದಲ್ಲಿ ಕನಕಗಿರಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಸಂಭ್ರಮದೊಂದಿಗೆ ರಥವನ್ನು ಎಳೆಯುವ ಸಂದರ್ಭದಲ್ಲಿ ಭಕ್ತರಿಂದ ಮೊಳಗಿದ “ಜೈ ಶ್ರೀ ರಾಮ್… ಜೈ ಶ್ರೀ ರಾಮ್…” ಘೋಷಣೆ ಇಡೀ ವಾತಾವರಣದಲ್ಲಿ ಭಕ್ತಿಯ ಉಮ್ಮಸ್ಸು ಇಮ್ಮಡಿಸಿತು.

ಭಕ್ತರು ಭಕ್ತಿ, ಭಾವದಿಂದ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ತೊಂಡಿತೇವರಪ್ಪ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಈ ಬಾರಿಯ ರಥೋತ್ಸವವು ಗತವೈಭವವನ್ನು ಮರುಕಳಿಸುವಂತೆ ಅದ್ಧೂರಿಯಾಗಿ ಜರುಗಿತು.

Leave a Reply

Your email address will not be published. Required fields are marked *