October 7, 2026
IMG-20260905-WA0113

*
*ಕನಕಗಿರಿ :*
ಸೆ 5 ಪಟ್ಟಣದ ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಶಿಕ್ಷಕರ ದಿನಾಚರಣೆಯನ್ನು ಬಹಳಷ್ಟು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಶಾಲೆಯ ಮುದ್ದು ಮಕ್ಕಳು ತಮ್ಮ ಕಡೆಯಿಂದ ಕೇಕ್ ತಂದು ಕತ್ತರಿಸಿ, ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.
​ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ನಾಗೇಶ್ ಮಾಟೂರು ಮಾತನಾಡಿ, ಶಿಕ್ಷಕರ ತತ್ವ ಆದರ್ಶಗಳನ್ನು ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿಸಿದರು. ಅಲ್ಲದೆ, ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಅವರ ತತ್ವ ಆದರ್ಶಗಳು ಹಾಗೂ ಪ್ರಾಮಾಣಿಕತೆಯನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
​ಕಾರ್ಯಕ್ರಮದಲ್ಲಿ ​ಶಾಲೆಯ ಮುಖ್ಯಗುರುಗಳಾದ ನಾಗೇಶ್ ಮಾಟೂರು, ​ಶಿಕ್ಷಕರಾದ ವೆಂಕಟೇಶ್ ರೆಡ್ಡಿ, ಪ್ರಿಯಾಂಕ, ರೇಖಾ, ವಿಜಯಲಕ್ಷ್ಮಿ ಹಾಗೂ ಹುಲಿಗಮ್ಮ
​ಶಾಲೆಯ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದವರು.

Leave a Reply

Your email address will not be published. Required fields are marked *