*ಕನಕಗಿರಿ,ಸೆ.22-*
ತಾಲೂಕಿನ ಕಾಟಾಪುರ ಕಾಲ್ಸಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ಶೂ ಸಾಕ್ಸ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಯ ಎಲ್ಲಾ ಮಕ್ಕಳಿಗೂ ಶೂ ಸಾಕ್ಸ್ ವಿತರಣೆ ಮಾಡಲಾಯಿತು.
ನಂತರ ಮುಖ್ಯ ಗುರುಗಳಾದ ವೆಂಕೋಬ ಪೂಜಾರರವರು ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ದುರುಗಪ್ಪ ಪಚ್ಚಿ, ಸದಸ್ಯರಾದ ಶಿವರಾಜ್ ಪಚ್ಚಿ, ಸುರೇಶ ತಳವಾರ, ವೆಂಕಟೇಶ ಈಳಗೇರ, ಹನುಮಂತ ಹರಿಜನ, ವೀರೇಶ ಪೂಜಾರ, ಅಮರೇಶ ಕಲ್ಗುಡಿ, ವಿಠಲ ಚಿಗರಿ, ಹನುಮಂತ ಆಕಳಕುಂಪಿ, ಶರಣೇಗೌಡ, ಶ್ರೀ ನಿವಾಸ ಗೊಲ್ಲರ, ಗ್ರಾಮದ ಮುಖಂಡರಾದ ಲಕ್ಷ್ಮಣಗೌಡ, ನಿರುಪಾದಿ ಕಲ್ಗುಡಿ, ಪಂಪಾಪತಿ ಪಚ್ಚಿ, ಮತ್ತು ಅತಿಥಿ ಶಿಕ್ಷಕರಾದ ಬಾಲರಾಜ್, ಶಿವಣ್ಣ, ಈರಮ್ಮ ಇದ್ದರು.
